ನಾಭಪಂಕ್ತಿ
ಅಶೋಕನ ಅಡಳಿತಕ್ಕೆ ಒಳಪಡದೆ ರಾಜ್ಯದ ಹೊರಗಡೆ ಇದ್ದ ಜನಾಂಗಗಳ ಪೈಕಿ ನಾಭಕದ (ನಭಾಕ) ನಾಭಪಂಕ್ತಿಗಳದೂ ಒಂದೆಂದು ಶಾಸನಗಳಲ್ಲಿ ಹೇಳಲಾಗಿದೆ. ನಾಭಕಪುರ ಉತ್ತರದ ಕುರುಗಳಿಗೆ ಸೇರಿದ್ದೆಂದು ವೈ ವತ್ರ್ತ ಪುರಾಣದಲ್ಲಿ ಹೇಳಲಾಗಿದೆ. ನಾಭಪಂಕ್ತಿಗಳು ಕಂಭೋಜರ ನೆರೆಯವರೆಂದು ಹಿಮಾಲಯದ ವಾಯುವ್ಯ ದಿಶೆಯಲ್ಲಿ ವಾಸಿಸುತ್ತಿದ್ದರೆಂದು ಈ ಪುರಾಣದ ಆಧಾರದ ಮೇಲೆ ಅಭಿಪ್ರಾಯಪಡಲಾಗಿದೆ. ಪಾಣಿನಿಯ ವ್ಯಾಕರಣ ಸೂತ್ರವೊಂದರ ಗಣಪಾಠದಲ್ಲಿ ನಾಭಾಕ ಮತ್ತು ಊರ್ಣನಾಭ ಎಂಬವು ಜನನಾಂಗಗಳ ಹೆಸರೆಂದು ಹೇಳಲಾಗಿದೆ. ನಾಭಪಂಕ್ತಿಗಳಿಗೂ ಗಂಧಾರರಿಗೂ ಸಂಬಂಧವಿದ್ದಿರಬಹುದು.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ